ಪ್ಲವನತೆ
	ಸ್ಥಿತ ತರಲದಲ್ಲಿ (ಸ್ಟ್ಯಾಟಿಕ್ ಫ್ಲೂಯಿಡ್) ಮುಳುಗಿರುವ ಯಾ ತೇಲಿಕೊಂಡಿರುವ ವಸ್ತುವಿನ ಮೇಲೆ ತರಲ ಬೀರುವ ಊಧ್ರ್ವ ಬಲ (ಬಾಯೆನ್ಸಿ).  ಪ್ಲವನಬಲ ಈಃ ಇದರ ಕಾರಣವಾದ ಗುರುತ್ವಾಕರ್ಷಣಬಲಕ್ಕೆದುರು ಊಧ್ರ್ವಮುಖವಾಗಿ ವರ್ತಿಸುತ್ತದೆ.  ಇದರ ಪರಿಮಾಣ ವಿಸ್ಥಾಪಿತ ತರಲದ ತೂಕಕ್ಕೆ ಸಮಕ್ರಿಯಾ ರೇಖೆ ವಿಸ್ಥಾಪಿತ ಘನಗಾತ್ರದ ಗುರುತ್ವಕೇಂದ್ರದ-ಇದರ ಹೆಸರು ಪ್ಲವನತಾ ಕೇಂದ್ರ - ಮೂಲಕ ಸಾಗುತ್ತದೆ.  ವಿಸ್ಥಾಪಿತ ತರಲದ ಘನಗಾತ್ರ v ಮತ್ತು ತರಲದ ವಿಶಿಷ್ಟ ತೂಕ (ಸ್ಪೆಸಿಫಿಕ್ ವೇಯ್ಟ್ - ಏಕಮಾನ ಘನಗಾತ್ರಕ್ಕೆ ತೂಕ)  ಆಗಿದ್ದರೆ ಪ್ಲವನಬಲ ಸಮಿಕರಣ ಈಃ=v ಆಗುವುದು.  ವಸ್ತುವಿನ ಕೆಳ ಮತ್ತು ಮೇಲು ಭಾಗಗಳ ಮೇಲೆ ತರಲಬಲದ ಊಧ್ರ್ವ ಘಟಕಗಳ ವ್ಯತ್ಯಾಸ ಕೂಡ ಪ್ಲವನಬಲದ ಪರಿಮಾಣವನ್ನು ಕೊಡುತ್ತದೆ. ಗೊತ್ತಿರುವ ವಿಶಿಷ್ಟ ತೂಕಗಳ ಎರಡು ಬೇರೆ ಬೇರೆ ತರಲಗಳಲ್ಲಿ ಒಂದೇ ವಸ್ತುವಿನ ವಿಲಂಬಿಸಿ (ತೂಗಿ) ತೂಕಮಾಡುವುದರ ಮೂಲಕ ಅದರ ಘನ ಗಾತ್ರವನ್ನೂ ತೂಕವನ್ನೂ ನಿರ್ದರಿಸಬಹುದು.
	ಹಾರಿಜ ಪ್ಲವನತೆ (ಹಾರಿಝಾಂಟಲ್ ಬಾಯೆನ್ಸಿ) ; ವಾಯು ಇಲ್ಲವೇ ಜಲ ಸುರಂಗಗಳಲ್ಲಿ ಪರೀಕ್ಷಿಸಲಾಗುವ ಪ್ರತಿರೂಪಗಳು ಹಾರಿಜ ಪ್ಲವನತೆಯನ್ನು ಅನುಭವಿಸುತ್ತವೆ.  ಪರೀಕ್ಷಣ ಖಂಡದ ನೇರ ಸ್ಥಿತ ಸಂಮರ್ದದಲ್ಲಿ (ಸ್ಟ್ಯಾಟಿಕ್ ಪ್ರೆಶರ್) ಬದಲಾವಣೆಗಳು ಉದ್ಭವಿಸುವುದರಿಂದ ಹಾರಿಜ ಪ್ಲವನತೆ ಉಂಟಾಗುವುದಾಗಿದೆ.  ಇದು ಸಂವೃತ ಪರೀಕ್ಷಣ ಖಂಡಗಳಲ್ಲಿ ಜಗ್ಗುವನ್ನೂ (ಡ್ರ್ಯಾಗ್) ವಿವೃತಖಂಡಗಳಲ್ಲಿ ನೂಕುಬಲವನ್ನೂ (ಥ್ರಸ್ಟ್ ಫೋರ್ಸ್) ಉತ್ಪಾದಿಸುತ್ತದೆ.
	(ಜೆ.ಎಸ್.ಎಸ್.ಎಸ್.)